ಅಬ್ದುರ್ ರಜಾಕ್
	ಇಮ್ಮಡಿ ದೇವರಾಯನ ಆಳ್ವಿಕೆಯಲ್ಲಿ ಈತ ಪರ್ಷಿಯ ದೇಶದಿಂದ ರಾಯಭಾರಿಯಾಗಿ ವಿಜಯನಗರಕ್ಕೆ ಬಂದು (1443) ಅಲ್ಲಿ ಏಳು ತಿಂಗಳು ಇದ್ದು ವೈಭವಪೂರ್ಣವಾಗಿದ್ದ ವಿಜಯನಗರ ಸಾಮ್ರಾಜ್ಯದ ಬಗ್ಗೆ ಕಣ್ಣಾರೆ ಕಂಡು ಕಿವಿಯಾರೆ ಕೇಳಿದ ಸಂಗತಿಗಳನ್ನು ಬರೆದಿಟ್ಟಿದ್ದಾನೆ. ಚಾರಿತ್ರಿಕ ದೃಷ್ಟಿಯಿಂದ ಅವನ ಬರೆವಣಿಗೆ ಬಹು ಉಪಯುಕ್ತವಾಗಿದೆ. ವಿಜಯನಗರ ಪಟ್ಟಣ ಅತಿ ವಿಸ್ತಾರವೂ ಸುಭದ್ರವೂ ಸೇನಾಬಲದಿಂದ ಸುಸಜ್ಜಿತವೂ ಸುಖಸೌಲಭ್ಯಗಳಿಂದ ಕೂಡಿದುದೂ ಆಗಿದ್ದು, ಅಲ್ಲಿಯ ವಿಶಾಲವಾದ ಅಂಗಡಿಬೀದಿಗಳಲ್ಲಿ ಮುತ್ತು ರತ್ನಗಳ ಮುಕ್ತವ್ಯಾಪಾರ ನಡೆಯುತ್ತಿತ್ತೆಂದು ಆತ ವರ್ಣಿಸಿದ್ದಾನೆ.     

   
(ಪಿ.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ